Archive for February 13th, 2008
ಹೋಗೇ ಸುಮ್ಮನೆ!
ಪ್ರೇಮಿಗಳಿಗೆ ಪ್ರತಿ ದಿನವೂ ಪ್ರೇಮಿಗಳ ದಿನವೇ. ಪ್ರತಿ ದಿನವೂ ಪ್ರೀತಿಸೋಣ. ಆ ನೆಪದಲ್ಲಿ ಇಲ್ಲಿದೆ ‘ಅಪಾರ’ ಅವರ ಒಂದು ಸುಂದರ ಕವಿತೆ. ಇದು ನಿಮ್ಮದೇ ಎಂದು ಹೇಳಿಕೊಂಡು ಪ್ರೆಸೆಂಟ್ ಮಾಡಲು ಅಡ್ಡಿಯಿಲ್ಲ..
ಹೋಗೇ ಸುಮ್ಮನೆ!
1
ಮಧ್ಯಾಹ್ನವ ಕಳೆಯುತಿದ್ದ
ಉದ್ಯಾನದ ಬೆಂಚು
ಮಳೆಯ ರಾತ್ರಿ ಹೊಳೆಯುತಿದ್ದ
ಒದ್ದೆ ಮುಖದ ಮಿಂಚು
ಒಬ್ಬರಿಗೆ ಇನ್ನೊಬ್ಬರು
ಕಾದು ಕೆಂಪಾದ ತಿರುವು
ಕಾಡಿದರೂ ಇರಲಿ ನೆನಪು
ಬೇಡ ಜಾಣ ಮರೆವು
ನಿನ್ನ ನೆನಪಲೆ ಕೊರಗುತಿರುವೆ
ಎನುವರೆಲ್ಲ ಜನ
ನಿನ್ನ ನೆನೆದೇ ಬದುಕುತಿರುವೆ
ಅರಿಯರೆನ್ನ ಮನ
2
ಶುಭಾಶಯ ಕೋರುವ ಹೆಸರಲ್ಲಿ
ಮೃದು ಅಂಗೈಯ ಮುಟ್ಟಿದೆ
ಸುಣ್ಣ ಆಗಿದೆ ಎಂದು ಸುಳ್ಳು ಹೇಳಿ
ಬೆನ್ನನೊಮ್ಮೆ ಮುಟ್ಟಿದೆ
ರಸ್ತೆ ದಾಟುವಾಗ ‘ಎಚ್ಚರ’ ಎಂದು
ತೋಳು [...]
ಒಂದು ಕೃತಿ -ಒಂದು ಕಲಾ ಕೃತಿ
ಇಲ್ಲೊಂದು ಕೃತಿಯಿದೆ-ಕಲಾಕೃತಿಯೂ ಇದೆ. ಎರಡೂ ಸುದೇಶ್ ಮಹಾನ್ ರಚನೆ. ಚೆ ಗೆವಾರ ಸುದೇಶರ ಪ್ರೀತಿಯ ಹೀರೋ. ಜಿ ಎನ್ ಮೋಹನ್ ಕ್ಯೂಬಾ ಪ್ರವಾಸ ಕಥನ ಬರೆದಾಗ ಅದರ ಮುಖಪುಟಕ್ಕಾಗಿ ಕುಂಚ ಕೈಗೆತ್ತಿಕೊಂಡರು. ಒಂದು ಪುಸ್ತಕಕ್ಕೆ ಬರೆದ ಕಲೆ ಬರೆದವರನ್ನೇ ಕಾಡುವುದು ಅಪರೂಪ. ಆದರೆ ಇಲ್ಲಿ ಹಾಗಾಗಲಿಲ್ಲ. ಸುದೇಶ್ ಈ ಕೃತಿ ಬರೆದ ಹಲವಾರು ವರ್ಷಗಳ ನಂತರವೂ ಆ ಮುಖಪುಟದ ಗುಂಗಿನಲ್ಲಿದ್ದರು. ತೈಲ ವರ್ಣ ರಚಿಸಲು ಮುಂದಾದಾಗ ಬೆನ್ನು ಬಿದ್ದು ಆ ಮುಖಪುಟಕ್ಕಾಗಿ ಬರೆದ ಚಿತ್ರ ತರಿಸಿಕೊಂಡರು. ಅವರು [...]
Read Full Post | Make a Comment ( 1 so far )ಕುಡಿಯೊಡೆದಿದೆ ಒಂದು ನೆನಪು- ಅದು ‘ನಿನ್ನ ನೆನಪು’
ಇದು ನೆನಪು- ನಿನ್ನ ನೆನಪು. ಕಾಡುವ ನೆನಪು. ಕೊಲ್ಲುವ ನೆನಪು. ಓಹ ಎನಿಸುವಂತೆ ಮೂಡಿ ಬಂದ ಒಂದು ಹೊಚ್ಚ ಹೊಸ ಕ್ಯಾಸೆಟ್ ನ ಹೆಸರು- ನಿನ್ನ ನೆನಪು. ‘ಇಲ್ಲಿವೆ ಕೆಲವು ಸೂಕ್ಷ್ಮ ಕವನಗಳು, ಇವುಗಳ ಭಾವನಾತ್ಮಕ ತುಡಿತ, ಅಧುನಿಕ ಸಂಗೀತದ ದ್ವನಿಯಲ್ಲಿ ಹೊಮ್ಮಿದೆ’ ಎನ್ನುತ್ತಾರೆ ಕ್ಯಾಸೆಟ್ ಕನಸು ಕಟ್ಟಿದವರು. ಇದು ಒಂದು ಕನಸುಗಾರರ ಸಾಹಸ. ಹೊಸ ತಲೆಮಾರಿನ, ಹೊಸ ಚಿಂತನೆಯ ಮನಸ್ಸುಗಳು ಒಂದುಗೂಡಿದ ಕಾರಣ ಹೊರಬಿದ್ದ ಸಾಹಸ.
ಎಸ್ ಭಾಗೆಶ್ರೀ ಕವಿತೆಗಳು ಕಾಡುವಂತಿದೆ. ಹೃದಯವನ್ನು ಮೀಟುತ್ತದೆ. ಎಸ್ ಆರ್ [...]







