Archive for February 12th, 2008
ಮೂಕವಾಗಿದೆ ಮಾತು ಬರಿ ರೋಧನ…
ಇಲ್ಲಿ ಕಾಲ ಚಲಿಸುತ್ತಿಲ್ಲ. ಮೌನದ ಮೊರೆ ಹೋಗಿದೆ. ಕುಪ್ಪಳ್ಳಿಯ ಮನೆಗೊಮ್ಮೆ ಹೋಗಿ ಬನ್ನಿ. ಆ ಕವಿಯನ್ನು ಕಳೆದುಕೊಂಡ ದುಃಖ ಆ ಮನೆಯ ಗಡಿಯಾರವನ್ನೂ ಹೊಕ್ಕು ನಿಂತಿದೆ. ಕುವೆಂಪು ಇಲ್ಲವಾದ ಸಮಯಕ್ಕೆ ಸರಿಯಾಗಿ ಗಡಿಯಾರವೂ ಮೂಕವಾಗಿದೆ. ಕುವೆಂಪು ಇಲ್ಲವಾದ ಆ ಘಳಿಗೆಯನ್ನು ಸಾರುತ್ತಾ….
Read Full Post | Make a Comment ( None so far )ಗುಜ್ಜಾರ್ ಗೆರೆ
ಗುಜ್ಜಾರ್ ಕಂಡಂತೆ ದೇಶದ ಆಗುಹೋಗು ಆಗೀಗ ನಿಮ್ಮ ಮುಂದೆ. ಬರಲಿರುವ ಕನ್ನಡ ಟೈಮ್ಸ್ ಸಂಚಿಕೆಯ ಈ ರೇಖೆಗಳು ಮುಂಗಡವಾಗಿ ನಿಮಗಾಗಿ.
Read Full Post | Make a Comment ( None so far )ಚೆನ್ನಾಗಿ ಬೆಳೆದಿದೆ ಹಾಗಲ, ಕಳಿಸಲಾ?
ಸುಧನ್ವಾ ದೇರಾಜೆ ತಮ್ಮ ಸಿಟಿಯೆಡೆಗಿನ ಕಾವ್ಯ ನೋಟವನ್ನು ಮುಂದುವರೆಸಿದ್ದಾರೆ. ಕಾನನದ ನಡುವಿನಿಂದ ಎದ್ದು ಬಂದ ಹುಡುಗನೊಬ್ಬ ಬೆಂಗಳೂರು ಎಂಬ ನಗರಿಯನ್ನು ಕಂಡ ಬಗೆ ಇಲ್ಲಿದೆ. ಎಕ್ಸ್ಕ್ಯೂಸ್ ಮಿ .. ಇದು ಸಖೀ ಗೀತ ಅಲ್ಲ ಸಿಟಿ ಗೀತ..
3
ಗಲಗಲ ಅಲುಗುತ್ತಿದೆ ಈ ನಗರ
ಬೆಳೆದು ಅಗಲಗಲ ಜಗದಗಲ.
ಇವತ್ತು ಬರ್ಲಾ, ನಾಳೆ ಆಗಲ್ಲ
ಪೈನ್‌ಕಿಲ್ಲರ್ ಮಾತ್ರೆ ತರ್ಲಾ, ಸಂಬಳ ಸಾಕಾಗಲ್ಲ
ಆ ಓನರ್ ಸರಿಯಿಲ್ಲ, ನೆಟ್ ಕನೆಕ್ಟ್ ಆ..ಗ್ತಿ..ಲ್ಲಾ..
ಅಮ್ಮ ಫೋನ್ ಮಾಡಿ ಅಂದಳು,
ಚೆನ್ನಾಗಿ ಬೆಳೆದಿದೆ ಹಾಗಲ, ಕಳಿಸಲಾ?
4
ಮೊನ್ನೆ ಬಂದವಳು ಅಂದಳು-
ಹೌದು, ಗದಗುಡುತ್ತಿದೆ ಶಹರ
ನಗ ತುಂಬಿದ [...]







