Archive for February 9th, 2008
ಎಲ್ಲ ಮರೆತಿರುವಾಗ…
ಇದು ಪಿ ಮಹಮದ್ ಕಂಡ ನೋಟ. ಪಿ ಮಹಮದ್ ನೋಟ ಹರಿತ ಎಂಬುದಕ್ಕೆ ಇಲ್ಲಿರುವ ಕಾರ್ಟೂನ್ ಗಳೇ ಸಾಕ್ಷಿ. ಮಹಮದ್ ರ ಈ ನೋಟಕ್ಕೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ನೀಡಿ ತನ್ನನ್ನು ಗೌರವಿಸಿಕೊಂಡಿದೆ. ‘ಎಲ್ಲ ಮರೆತಿರುವಾಗ…’ ಮತ್ತೆ ಕರ್ನಾಟಕದ ರಾಜಕಾರಣವನ್ನು ನೆನಪಿಸಿಕೊಳ್ಳಲು ಮಹಮದ್ ರಿಗೆ ಸಿಕ್ಕ ಪ್ರಶಸ್ತಿ ಒಂದು ನೆಪವಾಗಿದೆ. ಮಹಮದ್ ಅವರ ಸಂಪರ್ಕ: pmahamud@gmail.com
ಕುವೆಂಪುವಿಗೆ ಇಲ್ಲೂ ಒಂದು ಮನೆ
ಕುಪ್ಪಳ್ಳಿ, ವೆಂಕಟಪ್ಪ ಹಾಗೂ ಪುಟ್ಟಪ್ಪ ಮೂರೂ ನೆನಪುಗಳನ್ನು ಒಂದೇ ಕಡೆ ಹಿಡಿದಿಡಲಾಗಿದೆ. ತೇಜಸ್ವಿ ಕುಟುಂಬ ಕುವೆಂಪು ಅವರನ್ನೂ, ಅವರ ನೆನಪುಗಳನ್ನೂ ಇನ್ನಿಲ್ಲದಂತೆ ಕಾಪಾಡಿದೆ. ಅವರ ಪುಸ್ತಕಗಳು ಎಲ್ಲರಿಗೂ ದಕ್ಕುವಂತೆ ನೋಡಿಕೊಂಡಿದೆ. ಸುಂದರವಾಗಿ ಮುದ್ರಿಸಿ ಪ್ರತಿಯೊಬ್ಬರೂ ಕೊಳ್ಳುವಂತೆ ಮಾಡಿದೆ. ಬೇಂದ್ರೆ ಪುಸ್ತಕಗಳಿಗಾಗಿ ತಡಕಾಡಬೇಕಾದ ಪರಿಸ್ಥಿತಿ ಇರುವಾಗ ಕುವೆಂಪು ಕುಟುಂಬದ ಅಸ್ಥೆ ಗಮನಿಸುವಂತಿದೆ.
ಈ ಕಾಳಜಿ ಈಗ ವೆಬ್ ಲೋಕದಲ್ಲೂ ವ್ಯಕ್ತವಾಗಿದೆ. ಕುವೆಂಪು ಜೀವನ ಚರಿತ್ರೆ, ಅವರ ವಿಶ್ವ ಮಾನವ ಸಂದೇಶ, ಕೃತಿಗಳು, ನೆನಪು ಎಲ್ಲವೂ ಇಲ್ಲಿ ದಾಖಲಾಗಿದೆ. ಈ ವೆಬ್ [...]







