Archive for February 8th, 2008
ಸಖೀ ಗೀತ ಅಲ್ಲ….ಸಿಟಿ ಗೀತ….
ಕುಮಾರ ಪರ್ವತವನ್ನು ಇನ್ನೇನು ಚುಂಬಿಸಿಯೇಬಿಡುತ್ತೇನೆ ಎನ್ನುವಷ್ಟು ಹತ್ತಿರದಲ್ಲಿರುವ ನಾರ್ಣಕಜೆ, ಚೊಕ್ಕಾಡಿ, ಎಲಿಮಲೆ, ಕುಕ್ಕುಜಡ್ಕ… ಇವೆಲ್ಲವೂ ಕವಿತೆ ಅರಳಲು ಹೇಳಿ ಮಾಡಿಸಿದ ತಾಣಗಳು. ಇಂತಹ ಹಸಿರಿನ ಮಧ್ಯದಿಂದ ಎದ್ದು ಬಂದಾತ ಸುಧನ್ವಾ ದೇರಾಜೆ.
ಅಷ್ಟು ಚೆನ್ನಾಗಿ ಕವನ ಬರೆಯುವ ಈತ ಪತ್ರಿಕೋದ್ಯಮಕ್ಕೆ ಏಕೆ ಜೋತು ಬಿದ್ದನೋ? ಈಗ ಪತ್ರಕರ್ತ. ಪದಗಳ ಗಿರಣಿಯಲ್ಲಿ ಕಳೆದು ಹೋದವರೆಷ್ಟೋ, ಮತ್ತೆ ಹಲ್ಲು ಕಚ್ಚಿ ಎದ್ದು ಬಂದವರೆಷ್ಟೋ.. ಆ ನ್ಯೂಸ್ ಪ್ರಿಂಟ್ ರಾಶಿಗಾಗಲೀ, ರಕ್ಕಸ ಗಾತ್ರದ ಮೆಶಿನ್ಗಳಿಗಾಗಲೀ ಗೊತ್ತಿಲ್ಲ.
ದೇರಾಜೆ ಕುಟುಂಬ ಎಂದರೆ ಸಾಕು ದಕ್ಷಿಣ ಕನ್ನಡ [...]
ಜಾರ್ಜ್ ಬುಶ್ ಕೇವಲ 259 ಸುಳ್ಳು ಹೇಳಿದರು…
ಗಾಳಿ ಬೆಳಕು
ನಟರಾಜ್ ಹುಳಿಯಾರ್
“ಅಮೆರಿಕಾ ಅಧ್ಯಕ್ಷಗಿರಿಯಿಂದ ಇನ್ನೇನು ಇಳಿಯಲಿರುವ ಜಾರ್ಜ್ ಬುಶ್ ಸುಮಾರು ೨೫೯ ಸುಳ್ಳು ಹೇಳಿದ್ದಾರೆ” ಎಂದು ವಾಷಿಂಗ್ಟನ್ನಿನ ಎರಡು ಸುದ್ದಿ ಸಂಸ್ಥೆಗಳ ಅಧ್ಯಯನ ಹೇಳುತ್ತದೆ. ಈ ಅಧ್ಯಯನದ ಪ್ರಕಾರ ೨೦೦೧ರಲ್ಲಿ ಅಮೆರಿಕಾದ ಮೇಲೆ ಭಯೋತ್ಪಾದಕರ ದಾಳಿಯಾದ ಮೇಲೆ ಇರಾಕಿನಿಂದ ಅಮೆರಿಕಾದ ಭದ್ರತೆಗೆ ಎಷ್ಟು ಅಪಾಯದ ಬಗ್ಗೆ ಬುಶ್ ಮತ್ತು ಅಮೆರಿಕಾದ ಉನ್ನತ ಆಡಳಿತದಲ್ಲಿರುವ ಅಧಿಕಾರಿಗಳು ೯೩೫ ಹುಸಿ ಹೇಳಿಕೆಗಳನ್ನು ನೀಡಿದ್ದಾರೆ. ಅದರಲ್ಲಿ ಜಾರ್ಜ್ ಬುಶ್ ೨೫೯ ಹುಸಿ ಹೇಳಿಕೆ ನೀಡಿ ಅಗ್ರಸ್ಥಾನದಲ್ಲಿದ್ದರೆ, ಅವರ ರಾಷ್ಟ್ರೀಯ ಕಾರ್ಯದರ್ಶಿ [...]
ನಾಲ್ಕು ಮಾತಿಗೂ ಮಕ್ಕಳು ಹುಟ್ಟೋದಕ್ಕೂ ಏನು ಸಂಬಂಧ?
“ಭಾಮಿನಿ ಷಟ್ಪದಿ”
ಚೇತನಾ ತೀರ್ಥಹಳ್ಳಿ
ಘಮ್ಮನೆ ಮಲ್ಲಿಗೆ ಮಾಲೆ ನೇತುಬಿಟ್ಟ ಹೂ ಮಂಚ. ಗೋಡೆ ತುಂಬೆಲ್ಲ ಸೆಲ್ಲೋಟೇಪಲ್ಲಿ ಬಿಗಿದು ನಿಂತ ಕೆಂಪು ಗುಲಾಬಿಗಳು. ರೂಮಿನ ತುಂಬ ಪೋಲಿ ಪೋಲಿ ಸ್ಲೋಗನ್ ಹೊತ್ತ ಪೋಸ್ಟರುಗಳು. ಮಂಚದಡಿ ಎರಡು ಮೂರು ಅಲರಾಮ್ ಗಡಿಯಾರ. ಕಿಟಕಿ ಸಂದಿಯಲ್ಲಿ ಬಲೂನು. ಅಲ್ಲೆಲ್ಲೋ ಆಚೆ ಪಟಾಕಿಗಳ ದಾಂಧಲೆ…
ಅವನ ಪಟಾಲಮ್ಮು ಸಾಕಷ್ಟು ಮೆಹನತ್ತು ಮಾಡಿಯೇ ಕೋಣೆ ಸಿಂಗರಿಸಿತ್ತು. ಅವನಕ್ಕ, ತಂಗಿಯರು ಸುಮ್ಮಸುಮ್ಮನೆ ನಗುತ್ತ ನನ್ನನ್ನ ಅಲ್ಲಿ ಕೂರಿಸಿ, ಅಂವನ್ನೂ ಒಳ ದಬ್ಬಿ, ಬೀಡಾ ಬಾಯಿಗಿಡಿಸಿ ಫೋಟೋ ತೆಗೆದು ಹೋದರು.
ಅಂವ [...]







