ಮೋಟುಗೋಡೆಯ ಗೆಳೆಯರೇನು ಬರೆದವರೆ?

Posted on February 7, 2008. Filed under: ಬುಕ್ ಬಝಾರ್ |

ಮೋಟುಗೋಡೆಯಾಚೆ ಇಣುಕಿ. ಈ ಬ್ಲಾಗ್ ಹೆಸರು ಕೇಳಿಯೇ ಇರುತ್ತೀರಿ. ಈ ಬ್ಲಾಗ್ ಮೂಲಕ ಬ್ಲಾಗಮಂಡಲದ ಎಲ್ಲ ಜೀವಿಗಳಿಗೆ ಕಚಗುಳಿ ಇಡುತ್ತಿರುವವರು ಮಿತ್ರ ಸುಶ್ರುತ ದೊಡ್ಡೇರಿ ಮತ್ತವರ ತಂಡ. ಸುಶ್ರುತ ದೊಡ್ಡೇರಿ ಈಗ ಬ್ಲಾಗ್ ಲೋಕದಿಂದ ಪುಸ್ತಕ ಲೋಕಕ್ಕೆ ಜಿಗಿಯುತ್ತಿದ್ದಾರೆ. ತಮ್ಮ ಗೆಳೆಯರೊಂದಿಗೆ ಸೇರಿ ಒಂದು ಪುಸ್ತಕ ಬರೆದಿದ್ದಾರೆ. ಹೆಸರು “ಚಿತ್ರಚಾಪ”. ಭಾನುವಾರ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ (ಬೆಳಗ್ಗೆ ೧೦ ಗಂಟೆಗೆ) ಇದರ ಬಿಡುಗಡೆ.

ಏನಿದೆ ಪುಸ್ತಕದಲ್ಲಿ? ಈ ಮಿತ್ರರೇ ಬರೆದುಕೊಂಡಿರುವುದು ಹೀಗಿದೆ:

chitra.jpg

ರಿಸರದ ಬಗ್ಗೆ ನಾನು, ಶ್ರೀನಿಧಿ, ಅರುಣ್, ಶ್ರೀನಿವಾಸ್ ಮತ್ತು ಅನ್ನಪೂರ್ಣ -ಹೀಗೆ ಐವರು ಸೇರಿ ಬರೆದಿರುವ ಕಥೆ, ಕವನ, ಲೇಖನ, ಚಾರಣಾನುಭವಗಳನ್ನೊಳಗೊಂಡಿರುವ ಪುಸ್ತಕ ‘ಚಿತ್ರಚಾಪ’, ನಾಡಿದ್ದು ಭಾನುವಾರ ಬಿಡುಗಡೆಯಾಗುತ್ತಿದೆ. ಪ್ರೊ. ಜಿ. ವೆಂಕಟಸುಬ್ಬಯ್ಯ ಪುಸ್ತಕದ ಬಗ್ಗೆ ಮಾತಾಡಲಿದ್ದಾರೆ. ಕಥೆಗಾರ ವಸುಧೇಂದ್ರರ ಮುನ್ನುಡಿಯಿರುವ ಈ ಪುಸ್ತಕವನ್ನು ‘ಪ್ರಣತಿ’ ಪ್ರಕಾಶನ ಹೊರತರುತ್ತಿದೆ.

ಇದು ನಮ್ಮೆಲ್ಲರ ಮೊದಲ ಪುಸ್ತಕ. ಇಷ್ಟು ದಿನವೂ ಈ ಬ್ಲಾಗ್‍ಗಳ ಮುಚ್ಚಟೆಯ ಲೋಕದಲ್ಲೇ ಇದ್ದವರು ನಾವು.. ಈ ಪುಸ್ತಕದ ಮೂಲಕ ‘ಪುಸ್ತಕ ಲೋಕ’ಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ಮೊದಲ ತೊದಲು… ಹೇಗೋ ಏನೋ ಅರಿಯೆವು… ನೀವೆಲ್ಲ ನಮ್ಮ ಬ್ಲಾಗ್ ಬರಹಗಳಿಗೆ ತೋರಿದ ಪ್ರೀತಿ, ಪ್ರೋತ್ಸಾಹಗಳಿಂದಲೇ ಅರಳಿದ್ದು ನಮ್ಮ ಈ ಪುಸ್ತಕ ಮಾಡುವ ಕನಸು.. ಅಂದುಕೊಳ್ಳುತ್ತಿದ್ದೇನೆ: ನೀವೆಲ್ಲ ಈ ಕಾರ್ಯಕ್ರಮಕ್ಕೆ ಬಂದು, ಈ ಖುಷಿಯ ಕ್ಷಣಗಳಲ್ಲಿ ನಮ್ಮೊಂದಿಗಿದ್ದರೆ ಅದೆಷ್ಟು ಚೆನ್ನ ಅಂತ…

Make a Comment

Make a Comment: ( None so far )

blockquote and a tags work here.

  • ನಿಮ್ಮ ಇ- ಮೇಲ್ ಕೊಡಿ ಸಾಕು..ನೀವಿದ್ದಲ್ಲಿಗೆ 'ಅವಧಿ' ಕಳಿಸುತ್ತೇವೆ

    Enter your email address to subscribe to this blog

  • ಓದಿ ಓದಿ ಮರುಳಾಗಿ.. ನಮ್ಮ 'ಬುಕ್ ಬಜಾರ್'ನಲ್ಲಿ

    ಫೋಟೋ ಮೇಲೆ ಕ್ಲಿಕ್ ಮಾಡಿ 'ಓದು ಬಜಾರ್' ತಲುಪಿ

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ

    will be back after a week.....



    Caught in the wild

    .........one more year of mixed xpressions

    lets lift

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • ಕ್ಯಾಲೆಂಡರ್

    February 2008
    M T W T F S S
    « Jan   Mar »
     123
    45678910
    11121314151617
    18192021222324
    2526272829  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...