Archive for February 5th, 2008

ಅವುಗಳ ಜೊತೆ ಜೀವಿಸಿದ್ದೆ…

Posted on February 5, 2008. Filed under: ಚಿನ್ನದ ಪುಟಗಳಿಂದ |

ಲಂಕೇಶ್ ಕವಿತೆ ಕಾಡುತ್ತಾ ಇದೆ. ಅವ್ವ ಕವಿತೆ ಮಾತ್ರವಲ್ಲ, ಅವರ ಕಾಡುವ ಕವಿತೆಗಳು ಬೊಗಸೆಯ ತುಂಬಾ ಇದೆ. ಆ ಕಾರಣಕ್ಕಾಗಿಯೇ ಇಲ್ಲಿ ಕನ್ನಡದ ಪ್ರಮುಖ ಬರಹಗಾರರು ಚರ್ಚೆ ಕೈಗೆತ್ತಿಕೊಂಡಿದ್ದಾರೆ. ಅವಧಿ ಪ್ರಕಟಿಸಿದ-ಕತೆಗಳಾ ಮಾರಾಣಿ ಐರಾವತಿ- ಮೂರು ಲಂಕೇಶ್ ಸಿನೆಮಾ ಕವಿತೆಗೆ ಬಂದ ಪ್ರತಿಕ್ರಿಯೆ ಇದು. 
ಕೆ.ಫಣಿರಾಜ್ | phanikottur@gmail.com
ಲಂಕೇಶ್ಗೆ ಇದ್ದ ಭಾಷೆಯ ಶಕ್ತಿಯನ್ನು ಈ ಪದ್ಯಗಳು ಮತ್ತೊಮ್ಮೆ “ನಮ್ಮ ಮುಖಕ್ಕೆ ರಾಚುತ್ತವ”. ಕೋಟ್ಸ್ ನಲ್ಲಿ ಕೊಟ್ಟಿದ್ದು ಯಾಕೆಂದರೆ, ಭಾಷೆಯಲ್ಲಿ ದೃಷ್ಯ ಹಾಗು ಭಾವವನ್ನು ಕಾಣುವ ಅಪೂರ್ವವಾದ ಶಕ್ತಿ [...]

Read Full Post | Make a Comment ( None so far )

ತೇದ ಗಂಧದಂಥ ಪರಿಮಳದವನಿಗಾಗಿ

Posted on February 5, 2008. Filed under: ಬಾ ಕವಿತಾ |

ಇದು ಟೀನಾ ಬರೆದ ಕವನ. ಈ ಕವಿತೆಯೇ ತೇದ ಗಂಧದಂತಿದೆ. ಆ ಕಾರಣಕ್ಕಾಗಿಯೇ ಇಲ್ಲಿ ನಿಮಗಾಗಿ. ಇನ್ನೂ ಹೆಚ್ಚು ಕವನಗಳು ಬೇಕಾದರೆ ಟೀನಾರ ಬ್ಲಾಗ್ ಗೆ ಲಗ್ಗೆ ಹಾಕಿ.
1.
ನಿನ್ನ ನಗುವನು
ಸುಮ್ಮನೆ
ಬಚ್ಚಿಟ್ಟುಕೊಂಡಿರುವೆ
ಎಲ್ಲರಿಂದ
ಸಂಜೆ ಕಳೆವಾಗ
ಆಕಾಶಮಲ್ಲಿಗೆ ಹೂಗಳ
ಹಾದಿಯಿಂದ
ಹೇಗಾದರು
ಅಚ್ಚರಿ ಉಕ್ಕುವಂತೆ
ಬಂದೀಯ
ಎಂದು ಕಾದು
ಕುಳಿತಿರುವೆ
2.
ನನ್ನ ಈ ಅನುಕೂಲ
ನಿನ್ನ ಮಗುವಿನ ಮುಗ್ಧತೆ
ಅವನ ಮುಗುಳುನಗೆ
ಅವಳ ಹುಬ್ಬುಗಂಟು
ನನ್ನ ಅಸಹಾಯಕತೆ
ನಿನ್ನ ಮಾತುಕತೆ
ಎಲ್ಲವನು ಅಳೆದು ಸುರಿದು
ತೂಕಕ್ಕೆ ಬಿಸುಟು
ನಿನ್ನ ಮತ್ತಿನಲಿ
ಹಾಯಾಗಿ
ಕಾಲು ಚಾಚಬೇಕು
ಎಂಬ ಬಯಕೆ.
3.
ಬಿಸಿ ಹೊಯಿಗೆಯ ಮೇಲೆ
ನೀರು ಹುಯ್ದ ಹಾಗೆ
ನಮ್ಮಿಬ್ಬರ ಸಂಭಾಷಣೆ
ಹೊಗೆಯೆದ್ದು ಭಗ್ಗನೆ
ಎಲ್ಲ ಇಂಗಿದ ಹಾಗಾಗಿ
ಮಾತಿನಲಿ ಇರುವಾಗಲೆ
ಪುನಃ ನೀರಡಿಕೆ
-ಟೀನಾ ಶಶಿಕಾಂತ್

Read Full Post | Make a Comment ( 2 so far )

ಕಾಡುಕೋಣ ಏರಿಬಂದಿತ್ತ…

Posted on February 5, 2008. Filed under: ಫ್ರೆಂಡ್ಸ್ ಕಾಲೊನಿ |

ಬೇಟೆ ಸಾಹಿತ್ಯ, ಅದರ ಸ್ವಾರಸ್ಯ ಕೆದಂಬಾಡಿ ಜತ್ತಪ್ಪ ರೈಗಳ ಕಾಲಕ್ಕೇ ಮುಗಿಯಿತು ಎನ್ನುವಂಥ ಸ್ಥಿತಿಯಿದೆ. ಆಗೀಗ ಕೆಲವರ ಬರಹಗಳಲ್ಲಿ ಬೇಟೆ ಸಾಹಿತ್ಯದ ಅಷ್ಟಿಷ್ಟು ಝಲಕ್ ಕಾಣ್ಸಿಗುತ್ತದೆ. ನಮ್ಮ ಯುವ ಕವಿ ಶಶಿ ಸಂಪಳ್ಳಿ ಅಪರೂಪದ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಅದು ತಮ್ಮ “ಮಲೆಯ ಮಾತು” ಎಂಬ ಬ್ಲಾಗಿನಲ್ಲಿ. ಮೊದಲ ಶಿಖಾರಿಯ ಮಜಾ ಸವಿಯಲು ಹೋದ ಹುಡುಗರ ಮೇಲೆ ಕಾಡುಕೋಣ ಹೇಗೆಲ್ಲಾ ಏರಿಬಂತು ಅನ್ನೋದನ್ನ ನೀವೂ ಓದಿ ಅನುಭವಿಸಿ.
* * *

ಮೂಗಿಗೆ ಅಡರುತ್ತಿತ್ತು ಹೆಜ್ಜೇನಿನ ಸುವಾಸನೆ. ಅದೂ ತಾರಿ ಮರದ [...]

Read Full Post | Make a Comment ( None so far )

  • ನಿಮ್ಮ ಇ- ಮೇಲ್ ಕೊಡಿ ಸಾಕು..ನೀವಿದ್ದಲ್ಲಿಗೆ 'ಅವಧಿ' ಕಳಿಸುತ್ತೇವೆ

    Enter your email address to subscribe to this blog

  • ಓದಿ ಓದಿ ಮರುಳಾಗಿ.. ನಮ್ಮ 'ಬುಕ್ ಬಜಾರ್'ನಲ್ಲಿ

    ಫೋಟೋ ಮೇಲೆ ಕ್ಲಿಕ್ ಮಾಡಿ 'ಓದು ಬಜಾರ್' ತಲುಪಿ

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ

    will be back after a week.....



    Caught in the wild

    .........one more year of mixed xpressions

    lets lift

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • ಕ್ಯಾಲೆಂಡರ್

    February 2008
    M T W T F S S
    « Jan   Mar »
     123
    45678910
    11121314151617
    18192021222324
    2526272829  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...