Archive for February 4th, 2008
ಕಥೆಗಳಾ ಮಾರಾಣಿ ಐರಾವತಿ
“ಎಲ್ಲಿಂದಲೋ ಬಂದವರು” ಸಿನೆಮಾಕ್ಕೆ ಲಂಕೇಶರು ಬರೆದ ಮೂರು ಹಾಡುಗಳು ಕನ್ನಡ ಚಿತ್ರರಂಗದಲ್ಲೇ ಬಲು ಅಪರೂಪದವು. ಅವುಗಳಲ್ಲಿ “ಕೆಂಪಾದವೋ…” ಹಾಡು ಅತ್ಯಂತ ಜನಪ್ರಿಯ. ಅದರ ಜೊತೆಗೇ “ಎಲ್ಲಿದ್ದೆ ಇಲ್ಲೀತಂಕ…” ಮತ್ತು “ಕರಿಯವ್ನ ಗುಡಿ ತಾವ…” ಹಾಡುಗಳನ್ನು ಇಲ್ಲಿ ಕೊಡುತ್ತಿದ್ದೇವೆ. ಪಠ್ಯವಾಗಿ ಅವನ್ನು ಓದಿಕೊಳ್ಳುವಾಗ ಸಿಗುವ ಖುಷಿ ನಿಮ್ಮದೂ ಆಗಲಿ ಎಂದು.
——————————————————–
ಕೆಂಪಾದವೋ ಎಲ್ಲಾ
ಕೆಂಪಾದವೋ
ಹಸುರಿದ್ದ ಗಿಡಮರ
ಬೆಳ್ಳಗಿದ್ದ ಹೂವೆಲ್ಲ
ನೆತ್ತರ ಕುಡಿಧಾಂಗೆ ಕೆಂಪಾದವೋ
ಹುಲ್ಲು ಬಳ್ಳಿಗಳೆಲ್ಲ
ಕೆಂಪಾದವು
ನೂರು ಕಂದಮ್ಮಗಳು
ಕೆಂಪಾದವು
ಜೊತೆಜೊತೆಗೆ ನಡೆದಾಗ
ನೀಲ್ಯಾಗಿ ನಲಿದಂಥ
ಕಾಯುತ್ತ ಕುಂತಾಗ
ಕಪ್ಪಾಗಿ ಕವಿದಂಥ
ನುಡಿನುಡಿದು ಹೋದಾಗ
ಪಚ್ಚಾಯ ತೆನೆಯಂಥ
ಭೂಮಿಯು ಎಲ್ಲಾನೂ
ಕೆಂಪಾದವೋ
ನನಗಾಗ ಕೆಂಪಾದವೋ
ಕೆಂಪಾದವೋ ಎಲ್ಲಾ
ಕೆಂಪಾದವೋ
* * *
ಕರಿಯವ್ನ ಗುಡಿ ತಾವ
ಅರಳ್ಯಾವೆ [...]







