Archive for February 1st, 2008
ಬಿಲ್ವಮಂಗಳನ ವೇಶ್ಯೆ
“ಭಾಮಿನಿ ಷಟ್ಪದಿ”
ಚೇತನಾ ತೀರ್ಥಹಳ್ಳಿ
ಒಂದಾನೊಂದು ಕಾಲದಲ್ಲಿ ಓದಿಕೊಂಡಿದ್ದ ಕಥೆ ಧುತ್ತನೆ ನೆನಪಾಗಿದ್ದಕ್ಕೆ ಯಾವ ವಿಶೇಷ ಕಾರಣಗಳೂ ಹೊಳೀತಿಲ್ಲ. ಹೀಗೆ ನೆನಪಾದ ಕಥೆಯನ್ನ ನಿಮ್ಮೊಟ್ಟಿಗೆ ಹಂಚಿಕೊಳ್ಳೋಣವೆನ್ನಿಸಿತು.
* * *
ಅವನೊಬ್ಬ ಸದಾಚಾರಿ. ಮಹಾ ಭಕ್ತ. ಹೆಸರು- ಬಿಲ್ವ ಮಂಗಳ.
ನಿದ್ರೆ, ಹಸಿವು, ಮೈಥುನಗಳಷ್ಟೇ ಭಕ್ತಿಯೂ ಸಹಜವೇನೋ ಅನ್ನುವಷ್ಟು ಭಗವದ್ಭಕ್ತಿ ಅವನಲ್ಲಿ. ಅಥವಾ ನಿದ್ರೆ, ಹಸಿವಿನಷ್ಟೇ ತೀವ್ರವಾಗಿತ್ತು ಅವನ ಕಾಮ ವಾಂಛೆ.
ಚೂಡಾಮಣಿ, ಸೌಂದರ್ಯ ಶಿರೋಮಣಿ.
ಹುಟ್ಟಿದ್ದು ವೇಶ್ಯೆಯರ ಕುಲದಲ್ಲಾದರೂ ಮೈ ಮಾರಾಟಕ್ಕಿಟ್ಟಿರಲಿಲ್ಲ. ದಿನಾಲೂ ಅವಳೊಡನಾಡಲು ಹಂಬಲಿಸಿ ಬರ್ತಿದ್ದ ಬಿಲ್ವ ಮಂಗಲ ಅವಳನ್ನ ಮದುವೆಯಾಗಿರಲಿಲ್ಲ, ಅಷ್ಟೆ.
ಒಮ್ಮೆ ಹೀಗಾಯ್ತು. [...]







