Archive for June 30th, 2007
ಗುಜ್ಜಾರ್ ಬಣ್ಣಗಳ ಒಂದು ಗೊಂಚಲು
ಲಂಕೇಶ್ ಪತ್ರಿಕೆ ಆಗಿನ್ನೂ ಕಪ್ಪು ಸುಂದರಿ. ಕೆಲವೇ ಪುಟ, ಕಪ್ಪು ಬಣ್ಣ. ಆದರೆ, ಚೂಟಿ ಓಡಾಟ, ಚಾಟಿ ಏಟು ಇದರ ಟ್ರಂಪ್ ಕಾರ್ಡ್. ಲಂಕೇಶ್ ಪತ್ರಿಕೆಗೆ ಲಂಕೇಶ್ ಹೂರಣ ತುಂಬುತ್ತಿದ್ದರೆ ಪಕ್ಕದ ರೂಮಲ್ಲಿ ಕುಳಿತು ಅದಕ್ಕೆ ರೇಖೆ ತುಂಬುತ್ತಿದ್ದವರೇ ಗುಜ್ಜಾರ್. ಬಾಣಗೆರೆ ಗುಜ್ಜಾರಪ್ಪ ಅರ್ಥಾತ್ ಗುಜ್ಜಾರಪ್ಪ ಆರ್ಥಾತ್ ಗುಜ್ಜಾರ್. ದೊಡ್ಡ ಆಕಾರ, ಮೆಲುದನಿಯ ಗುಜ್ಜಾರ್ ಸುಂದರಾಂಗ. ಸದಾ ಮುಖಕ್ಕೆ ತೀಡಿಕೊಂಡ ಮುಗುಳ್ನುಗು. ಜೊತೆಗೆ ಸಹ ಕಲಾವಿದ ಸೂರಿ, ಲೈಬ್ರರಿಯ ಶಿವರಾಂ ಜೋಡಿಯಾದರಂತೂ ಒಂದಿಷ್ಟು ಚೇಷ್ಟೆ.
ಸೀರಿಯಸ್ ಕಲಾವಿದರ ಮಧ್ಯೆ [...]
“ವೆಂಕಿ ಬರ್ಗರ್”
ಆಂ! ಹೂ ಈಸ್ ವೆಂಕಿ? ವ್ಹಾಟ್ ಈಸ್ ಬರ್ಗರ್? ಮುದ್ದೆ ಬಸ್ಸಾರ್, ಅನ್ನ ಸಾಂಬಾರ್ ಮಧ್ಯೆ ಏನಿದು ಧಿಡೀರ್? ನಿಮ್ಮ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಪ್ರಯಾಣದಲ್ಲಿದೆ. ಕಾಯುತ್ತೀರಲ್ಲ?
ಕವರನೆಂಬವನ ರಂಗಪ್ರವೇಶವು
ವಿಜಿ
ಕವರ.
ಹಾಗೆಂಬುದು ನಮ್ಮ ಈ ಕಥಾನಾಯಕನ ಹೆಸರಾಗಿ ಪ್ರಚಲಿತದಲ್ಲಿತ್ತು. ಅವನ ನಿಜವಾದ ಹೆಸರು ಬೇರೆಯೇ ಏನೋ ಇದೆ ಎಂದೇ ಊರಲ್ಲಿ ಕೆಲವು ತಲೆಗಳು ವಾದಿಸುತ್ತಿದ್ದವು. ಆದರೆ ಆ ಹೆಸರು ಏನೆಂಬುದು ಅವಕ್ಕೂ ಗೊತ್ತಿರಲಿಲ್ಲ. ಹಾಗಾಗಿ ಆ ತಲೆಗಳ ಬಗ್ಗೆ, “ಅವು ತಲೆಗಳಲ್ಲ, ತರಲೆಗಳು” ಎಂಬ ವಿಶೇಷವಾದ್ದೊಂದು ಕಾಮೆಂಟೂ ಹುಟ್ಟಿಕೊಂಡಿತ್ತು. ಅದೇನಾದರೂ ಇದ್ದುಕೊಂಡು ಹೋಗಲಿ. ನಮ್ಮ ಕವರನದು ಮಾತ್ರ ಕೆಸುವಿನೆಲೆ ಮೇಲಿನ ನೀರಿನ ಹನಿಯಂತಾ ವ್ಯಕ್ತಿತ್ವವೆಂಬುದು ಊರಿಗೇ ಗೊತ್ತಿದ್ದ ಸಂಗತಿ.
ಎದುರಲ್ಲೇ ತನ್ನನ್ನು ಯಾರಾದರೂ ಏನಾದರೂ ಅಂದರೂ ಹ್ಹೆಹ್ಹೆ ಎಂದು ನಕ್ಕು [...]







