Archive for June 29th, 2007
ಪಂಪ ಬೆಳ್ಳುಳ್ಳಿ ತಿಂದಿದ್ದನಾ?
ಹೆರಡೋಟಸನ ಪ್ರಕಾರ ಪ್ರಾಚೀನ ಈಜಿಪ್ಟಿನಲ್ಲಿ ಬೆಳ್ಳುಳ್ಳಿ ಯಥೇಚ್ಛವಾಗಿ ಉಪಯೋಗದಲ್ಲಿತ್ತು. ಅಲ್ಲಿಯೇ ಕೃಷಿಯಾಗುತ್ತಿತ್ತು. ತೌರೂರಾದ ಮಧ್ಯ ಏಷಿಯಾದಿಂದ ಈಜಿಪ್ಟಿಗೆ ರವಾನೆಯಾಗಿದ್ದಿರಬೇಕು.
ತೌರೂರಿನಲ್ಲಿ ಬೆಳ್ಳುಳ್ಳಿಯ ಹೆಸರು ಶುಮಿನ್, ಶಮ್. ಸಂಸ್ಕೃತದ ಲಶುನ ಇದೇ ಬುಡಕಟ್ಟಿಗೆ ಸೇರಿದ ಪದ. ಈ ಪದದ ರೂಪಾಂತರಗಳೇ ಉತ್ತರ ಭಾರತದ ಭಾಷೆಗಳಲ್ಲೆಲ್ಲ ಪ್ರಚಾರದಲ್ಲಿವೆ. ದ್ರಾವಿಡ ಭಾಷೆಗಳಲ್ಲಿ ವೆಳ್ಳುಳ್ಳಿ, ಬೆಳ್ಳುಳ್ಳಿ, ಬೊಳ್ಳುಳ್ಳಿ ಮೊದಲಾದ ಹೆಸರುಗಳು ಚಲಾವಣೆಯಲ್ಲಿವೆ. ಇವು ಬಿಳಿಯ+ಉಳ್ಳಿ (=ಗಡ್ಡೆ) ಎಂಬ ಸಂಯೋಜನೆಯಿಂದ ಉಂಟಾದ ಪದಗಳಂತೆ ಕಾಣುತ್ತವೆ.
“ಪಂಪ ಬೆಳ್ಳುಳ್ಳಿಯನ್ನು ತಿಂದಿದ್ದನೋ ಇಲ್ಲವೋ ಹೇಳುವುದು ಸಾಧ್ಯವಿಲ್ಲ. ಅದರ ದುರ್ನಾತವನ್ನಂತೂ ಅರಿತಿದ್ದ. [...]
ಕಂಗಳ ಕೊಳದಲ್ಲಿ ಕಪ್ಪು ಚೆಲುವೆಯರು
ನಾ ಕರಿಯಳೆಂದು ನೀ ಜರಿಯಬೇಡ ಎಲೆ ಗೆಳತಿ ಗರ್ವದಿಂದ ಎಂಬುದಕ್ಕೆ ಸಾಕ್ಷಿಯೇನೋ ಎಂಬಂತೆ ಈ ಚಿತ್ರಗಳಿವೆ.
ಇದು ಬಣ್ಣದ ಯುಗ. ಬಣ್ಣವೇ, ಬಣ್ಣ ಬಣ್ಣದ ಮಾತೇ ಎಲ್ಲರನ್ನೂ ಮರುಳುಗೊಳಿಸುತ್ತಿದೆ. ಆದರೇನು? ಕಪ್ಪು ಬಿಳುಪಿನ
ಹಿರಿಮೆಗೆ ಒಂದಿಷ್ಟೂ ಕುಂದುಂಟಾಗಿಲ್ಲ. ನಾವು ನಮ್ಮ ಪುಸ್ತಕದಲ್ಲಿ ಅಡಗಿಸಿಟ್ಟ ನವಿಲುಗರಿಗಳೇನೋ ಎಂಬಂತೆ ಈ ಚಿತ್ರಗಳು ಜಿಗಿದು ಬಂದಿವೆ.
ಬ್ರೆಜಿಲ್ ನ ಲಿಯೋ ರೆಗ್ನಿಯರ್ (ಇದೇ ಅವನ ಹೆಸರಿನ ಸ್ಪಷ್ಟ ಉಚ್ಚಾರ ಎಂಬ ಬಗ್ಗೆ ನಮಗೆ ಖಾತರಿ ಇಲ್ಲ) ಕ್ಲಿಕ್ಕಿಸಿದ ಚಿತ್ರಗಳು ಇಲ್ಲಿವೆ. ಮಾರ್ಕ್ವೆಜ್, ದಾಸ್ತೋವಸ್ಕಿಯನ್ನು ಇಷ್ಟಪಡುವ ಲಿಯೋನ [...]







