Archive for June 27th, 2007
ಕಥೆಗಳು ಬೆಳಗಲಿ “ಛಂದ”ದಿಂದ
ಸೊಂಡೂರಿನ ಬಾಗಿಲಲ್ಲೆ ಸಾಫ್ಟ್ ವೇರ್ ಲೋಕದ ಮೋಡ, ಮಳೆ, ಗಾಳಿ, ಬಿಸಿಲು… ಇವೆಲ್ಲ ಕಾಣುವಂತಾದರೆ ಹೇಗಿದ್ದೀತು? ಇಂಥ ಅಚ್ಚರಿಯನ್ನು ನಿಶ್ಚಯಿಸಿದವರು ಕಥೆಗಾರ ವಸುಧೇಂದ್ರ. ಒಂದು ಪುಟ್ಟ ಊರಿನಲ್ಲೂ ಓದುಗರ ಗ್ರಹಿಕೆಗೆ ದಕ್ಕುವ ಹಾಗೆ, ಎಲ್ಲ ಬೆರಗಿನಿಂದ ನೋಡುವ ಐಟಿ ಕ್ಷೇತ್ರದ ಮನುಷ್ಯಲೋಕವನ್ನು, ಮನಸ್ಸುಗಳ ಲೋಕವನ್ನು ಅಕ್ಷರಗಳಲ್ಲಿ ಸೆರೆ ಹಿಡಿದು ಕೊಡುತ್ತಿರುವವರು ವಸುಧೇಂದ್ರ.
ವಸುಧೇಂದ್ರ ಬಳ್ಳಾರಿಯ ಸೊಂಡೂರಿನ ಕಕ್ಷೆ ದಾಟಿ ಬಂದು ಬಹು ಕಾಲವೇ ಆಯಿತು. ಆದರೆ ಅವರ ಬರವಣಿಗೆಯ ಬಯಲಲ್ಲಿ ಮಾತ್ರ ಸೊಂಡೂರು ಒಂದು ಊರಾಗಿ, ಪ್ರೀತಿ ಚಿಮ್ಮಿಸುವ [...]







