Archive for June 24th, 2007
ಆ ಪುಟಗಳಲ್ಲಿತ್ತು, ಲವಲವಿಕೆಯೆಂಬ ಹಕ್ಕಿಗಳ ಕಲರವ
ಕಥೆಗಾರ ಜಯಂತ್ ಕಾಯ್ಕಿಣಿ ಮುಂಬೈ ಬಿಟ್ಟು ಬೆಂಗಳೂರಿಗೆ ಬಂದಾಗ ಅವರಿಗೂ ಗೊತ್ತಿಲ್ಲದ ಹಾಗೆ ಅವರೊಳಗೊಂದು ಸುಂದರ ಕನಸು ಇತ್ತು. ಅದಕ್ಕೆ ಅಷ್ಟೇ ಸೊಗಸಾದ ರೂಪವೂ ಸಿಕ್ಕಿದ್ದು ಅವರು “ಭಾವನಾ” ಮಾಸಿಕದ ಸಂಪಾದಕರಾದಾಗ. ಪತ್ರಿಕೋದ್ಯಮಕ್ಕೆ, ಅದರಲ್ಲೂ ಸಾಹಿತ್ಯಾಸಕ್ತರಿಗೆ ಹೊಸ ಗರಿಗಳ ಹಕ್ಕಿ “ಭಾವನಾ” ರೂಪದಲ್ಲಿ ಸಿಕ್ಕಿತ್ತು.
ನಿಜಕ್ಕೂ ಭಾವನಾ ಅಕ್ಷರದ ಜಗುಲಿಯಲ್ಲಿ ಹೊಸ ಪುಳಕವನ್ನೇ ಸೃಷ್ಟಿಸಿತು. ಪತ್ರಿಕೆಯೊಂದನ್ನು ಇಷ್ಟೊಂದು ಮಧುರವಾಗಿರುವಂತೆಯೂ ತರಲು ಸಾಧ್ಯವೇ ಎನ್ನಿಸುವ ಹಾಗೆ ಮಾಡಿತು. ಮನದ ಮಿಡಿತಗಳ ಕಾಗದದ ದೋಣಿಯಾಗಿಬಿಟ್ಟಿತು. ತಾನು ಹಚ್ಚಿದ ಬೆರಗಿನಿಂದಾಗೇ ಅದು ಬಹುಬೇಗ [...]
ಕೈ ಹಿಡಿದು ನಡೆಸಿದವ ನೀನಲ್ಲವೆ…
ಯಾಮಿನಿ
ನನಗೆ ಗೊತ್ತು ಕಣೋ “ಚಂದಮಾಮ”,
ಅವತ್ತು ನೀನು ಮತ್ತೆ ಮತ್ತೆ ನಮ್ಮನ್ನು ಕರೆದು ಕೂರಿಸಿಕೊಂಡು ಕಥೆಗಳನ್ನು ಹೇಳದೇ ಇರುತ್ತಿದ್ದರೆ ಇವತ್ತು ಹೀಗೆ ನಿನ್ನೊಂದಿಗೆ ಮನಸು ತೆರೆದಿಟ್ಟು ಮಾತನಾಡಿಸುವುದಕ್ಕೂ ನನ್ನೊಳಗೊಂದು ಭಾವದೊರತೆ ಇರುತ್ತಿರಲಿಲ್ಲ.
ಇಂದಿನ ಹುಡುಗರದ್ದಾದರೂ ಎಂಥ ಸ್ಥಿತಿ ನೋಡು. ಇಲ್ಲಿ ಇವರೆದುರು ಮನಸ್ಸಿನಲ್ಲಿ ಅದ್ದಿ ತೆಗೆದ ಅಕ್ಷರಗಳೇ ಇಲ್ಲ. ಲಯ, ನಾದ ಯಾವುದೂ ಇಲ್ಲ. ಇದನ್ನೆಲ್ಲ ನೋಡುವಾಗ ವ್ಯಥೆಯಾಗುತ್ತದೆ. ನನ್ನ ಪಾಲಿಗಿದ್ದ ಅದೃಷ್ಟ ಅದೆಷ್ಟು ದೊಡ್ಡದಾಗಿತ್ತಲ್ಲ ಎಂದೆನಿಸುತ್ತದೆ. ಆದರೆ ಒಂದು ಮಾತು ಮಾತ್ರ ನಿಜ. ನಿನ್ನನ್ನು ಹೊಗಳುತ್ತೀನಿ ಅಂತಲ್ಲ. ಅಂಥ [...]







