Archive for June 19th, 2007
ಹಾಲು ಕುಡಿದಾ ಹುಡುಗನ ಬಲ್ಲಿರೇನ…
ರಷೀದ ನಮ್ಮ ನಡುವಿನ ಪ್ರೀತಿಯ ಹೆಸರು. ಒಮ್ಮೆ ಮಗುವಿನಂತೆ, ಮತ್ತೊಮ್ಮೆ ಸಂತನಂತೆ, ಮಗದೊಮ್ಮೆ ಕಿಲಾಡಿಯಂತೆ ಮಾತಾಡುವ ಇವರ ಬರಹಗಳೊಳಗಿನ ಹುಡುಗ ಪ್ರೀತಿ ಮಾಡೋ ಹೊತ್ತಲ್ಲಿ ಕಾಡು ಸುತ್ತುತ್ತಾನೆ. ಗಿಡಕ್ಕೆ ಪಾತಿ ಮಾಡಿ ನೀರು ಬಿಡುತ್ತಾನೆ. ಚೇಷ್ಟೆ ಮಾಡೋ ಹೊತ್ತಲ್ಲಿ ಗಂಭೀರವಾಗುತ್ತಾನೆ.
ಇದು, ಕವಿ, ಕಥೆಗಾರ ಅಬ್ದುಲ್ ರಷೀದ್ ಬಗ್ಗೆ ಹೇಳುವ ಇಸ್ಮಾಯಿಲ್ ಸ್ಟೈಲ್.
ಮೋಹಕವಾಗಿ ಬರೆಯುವ ರಷೀದ್, ಕಥೆಗಳಲ್ಲಿ ಪ್ರಾಣಪಕ್ಷಿಯ ಹಾಡು ಕೇಳಿಸುತ್ತಾರೆ. ಕಾವ್ಯದಲ್ಲಿ ಬೇರೊಂದೇ ಬಗೆಯ ಗಂಧ ಬಚ್ಚಿಡುತ್ತಾರೆ. ಪ್ರಬಂಧಗಳಲ್ಲಂತೂ ಮಾತಿಗೂ ಆಚೆ ನಡೆಸಬಯಸುತ್ತಾರೆ.
ರಷೀದರ ಶಕ್ತಿಗೆ ಗೌರವಗಳೂ ಸಂದಿವೆ. [...]
ಕಿ ರಂ ನಾಗರಾಜ್ ಎಂಬ ಗಾರುಡಿಗ
ಅಬ್ದುಲ್ ರಷೀದ್
ಶ್ರಾವಣದ ಕೊನೆಯ ಶನಿವಾರ ಅಪರಾಹ್ನ. ಕೊತ್ತಂಬರಿ, ಮೆಂತೆ ಸೊಪ್ಪು, ಚೆಂಡು ಹೂ, ಸೇವಂತಿಗೆ. ಕುಂಕುಮ, ಅಗರಬತ್ತಿ ಮತ್ತು ಬೀದಿಯ ತುಂಬ ತಳ್ಳಾಡುತ್ತಾ ಹೆಗಲಿಗೆ ಒರೆಸಿ ಬೆವರುತ್ತ ನಡೆಯುತ್ತಿರುವ ಮಂದಿಯ ಮಿಶ್ರ ಪರಿಮಳ.
ಕಿ.ರಂ ನನ್ನನ್ನು ಬೆಂಗಳೂರಿನ ಕೃಷ್ಣರಾಜ ಮಾರುಕಟ್ಟೆಗೆ ತಾಗಿಕೊಂಡಿರುವ ರಸ್ತೆಗಳಲ್ಲಿ ನಡೆಸುತ್ತಿದ್ದರು. ಎಲ್ಲ ದೇವಾಲಯಗಳೂ, ದೇವ ದೇವತೆಗಳೂ ಹಳದಿಯ ಹೂಗಳಿಂದ ಅಲಂಕೃತಗೊಂಡು ಸಂಜೆಗೆ ಬರುವ ಭಕ್ತರನ್ನು ಕಾಯುತ್ತಿದ್ದವು.. ಈ ದೇವರುಗಳು, ಈ ದೇವತೆಗಳು, ಈ ತಳ್ಳುವ ಜನರು, ಈ ಅಗಾಧ ಮನುಷ್ಯವಾಸನೆ ಮತ್ತು ಹೂವುಗಳ ಪರಿಮಳ. [...]
ನಿರುತ್ತರನಾದನೆ ಚಾರ್ವಾಕ?
ಇದು ಅವಧಿಗಾಗಿ ಮಾತ್ರ
ಡಾ. ನಟರಾಜ್ ಹುಳಿಯಾರ್
ಸುಮಾರು ೩೫ ವರ್ಷಗಳ ಕಾಲ ಕರ್ನಾಟಕದ ಅನೇಕ ರೀತಿಯ ಚಳವಳಿಗಳನ್ನು ಜೀವಂತವಾಗಿರಿಸಿದವರು ಪ್ರೊ. ಕೆ ರಾಮದಾಸ್. ಮಹಾರಾಜ ಕಾಲೇಜಿನ ಕ್ಲಾಸುಗಳಲ್ಲಿ, ಮೈಸೂರಿನ ಮೂಲೆಗಳಲ್ಲಿ, ಕರ್ನಾಟಕದ ನೂರಾರು ಊರುಗಳಲ್ಲಿ ಮಾಡಿದ ಭಾಷಣದ ಮೂಲಕವೇ ನಾಡಿನ ರಾಜಕಾರಣ ಹಾಗೂ ಸಮಾಜವನ್ನು ಕಟುವಾಗಿ ವಿರ್ಮಶಿಸಿದವರು ಅವರು. ಎಲ್ಲಾ ಮುಖ್ಯ ಚಳವಳಿಗಳ ಜೊತೆಗಿದ್ದು, ಬರಬರುತ್ತ ಅವುಗಳ ರಾಜಿಗಳನ್ನು ಒಪ್ಪದೆ ದೂರಾದವರು. ಇದು ರಾಮದಾಸ್ ವ್ಯಕ್ತಿತ್ವದ ಮುಖ್ಯ ಗುಣವನ್ನು ಹೇಳುತ್ತದೆ.
ರಾಮದಾಸ್ ತಮಗನಿಸಿದ್ದನ್ನು ಹೇಳಬಲ್ಲವರಾಗಿದ್ದರಿಂದ ಅವರು ಯಾವುದೇ ಚಳವಳಿಗಳ ಜೊತೆ [...]
ರಾಮದಾಸ್ ಗಳಿಗೆ
ರಾಮದಾಸ್ ಬದುಕಿನ ಅಪರೂಪದ ಕ್ಷಣಗಳು
ಹೀಗೆ ಸೆರೆಯಾಗಿವೆ…
ಲಂಕೇಶ್, ತೇಜಸ್ವಿ ಜೊತೆ ರಾಮದಾಸ್
ರಾಮದಾಸ್ ಮದುವೆ ಆಮಂತ್ರಣ ಪತ್ರಿಕೆ ಹೀಗಿತ್ತು
ರಾಮದಾಸ್ ಚಿತ್ರ ಕ್ಲಿಕ್ಕಿಸುತ್ತಿರುವ ಮಗಳು ಸಮತಾ. ಜೊತೆಯಲ್ಲಿ ಪತ್ನಿ ನಿರ್ಮಲಾ
ರಾಮದಾಸ್ ತೀರಿಕೊಂಡರು
ಹಿರಿಯ ಚಿಂತಕ ಪ್ರೊ. ಕೆ ರಾಮದಾಸ್ ಇನ್ನಿಲ್ಲ. ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ತೇಜಸ್ವಿ ನಿಧನದ ಬೆನ್ನಲ್ಲೇ ಸಾಂಸ್ಕೃತಿಕ ಲೋಕ ಮತ್ತೊಂದು ಸಾವಿನ ಆಘಾತ ಎದುರಿಸುವಂತಾಗಿದೆ. ನಮ್ಮ ತಲೆಮಾರಿಗೆ ವೈಚಾರಿಕ ಪ್ರಜ್ಞೆ ಮೂಡಿಸಿದ ಲಂಕೇಶ್, ತೇಜಸ್ವಿ, ರಾಮದಾಸ್ ತ್ರಿವಳಿಗಳ ಕೊನೆಯ ಕೊಂಡಿ ರಾಮದಾಸ್ ಇನ್ನಿಲ್ಲವಾಗಿದ್ದಾರೆ. ಇನ್ನು ಮೈಸೂರು ನಿರುತ್ತರ.
—————————————————————-
ರಾಮದಾಸ್ ಕುರಿತ ನೆನಪುಗಳನ್ನು ವಿಮರ್ಶಕ ಡಾ. ನಟರಾಜ್ ಹುಳಿಯಾರ್ ಇನ್ನು ಕೆಲವೇ ಕ್ಷಣಗಳಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ.







