Archive for June 18th, 2007
ಪಿಜ್ಜಾ ಹಟ್ ನಲ್ಲಿ ರಾಗಿ ರೊಟ್ಟಿ!
ಊರ್ಮಿಳೆ
ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ…
ದಾಸರ ಪದ ಸಿ.ಡಿ. ತಟ್ಟೆಯಿಂದ ಚಿಮ್ಮಿ ಬರುತ್ತಿದೆ. ರಾಗಿ ಎಂಬುದನ್ನು ದಾಸರು ನೋಡಿದ ಬಗೆಯೇ ಬೇರೆ. ಯೋಗ್ಯ”ರಾಗಿ” ಭೋಗ್ಯ”ರಾಗಿ” ಭಾಗ್ಯವಂತ”ರಾಗಿ” ಎಂದು.
“ಆಗುವುದು” ದಾಸರ ನೋಟದಲ್ಲಿ ರಾಗಿಯಾಯಿತು.
ಮೊನ್ನೆ ಗೆಳೆಯರೊಬ್ಬರು ಹೇಳುತಿದ್ದರು. ಒಂದೊಂದು ಶಬ್ದಕ್ಕೂ ಒಂದೊಂದು ವಾಸನೆ ಇದೆ, ಬಣ್ಣ ಇದೆ, ಆಕಾರ ಇದೆ ಅಂತ. ಹೇಗಪ್ಪಾ ಅಂತ ಅಂದುಕೊಳ್ಳುವಾಗಲೇ, ಉದಾಹರಣೆಗೆ ಅವ್ವ ಹಾಗೂ ಮಮ್ಮಿ ಎಂದರು. ಹೌದಲ್ಲಾ ಅನಿಸಿತು.
“ನನ್ನವ್ವ ಫಲವತ್ತಾದ ಕಪ್ಪು ನೆಲ” ಎನ್ನುವ ಲಂಕೇಶರ ಕವಿತೆಗೂ “ಮಮ್ಮಿ ಮಮ್ಮಿ ಮಾರ್ಡ್ರನ್ ಬ್ರೆಡ್” [...]







