Archive for June 13th, 2007

ತೇಜಸ್ವಿಯವರಿಗೆ ನಮಸ್ಕಾರ!

Posted on June 13, 2007. Filed under: ನೆನಪು |

ತೇಜಸ್ವಿಯವರು ಮೀನಿನ ಶಿಕಾರಿಗೆ ಎದ್ದು ಹೊರಟವರಂತೆ ದಿಢೀರನೆ ಹೊರಟು ಹೋಗಿದ್ದಾರೆ. ಆದರೆ ವಿಸ್ಮಯವಾಗಿ, ಮೂಡಿಗೆರೆಯ ತನ್ಮಯಿ ಪಥಿಕನಾಗಿ ಇಲ್ಲೇ ನಡೆದಾಡುತ್ತಿದ್ದಾರೆ.
ಕನ್ನಡ ಟೈಮ್ಸ್ ಪತ್ರಿಕೆ ತೇಜಸ್ವಿ ಗಳಿಗೆಗಳನ್ನು ಹಿಡಿದಿಡಲೆಂದೇ ಪ್ರತಿ ಸಂಚಿಕೆಯ ಎರಡನೇ ಪುಟ ಮೀಸಲಿರಿಸಿದೆ. ಅಲ್ಲಿ ಒರತೆಯಂತೆ ಉಕ್ಕುತ್ತಿರುವ ನೆನಪುಗಳು ಆ ಮಾಯಾವಿಯ ಲೋಕವನ್ನು ತೆರೆದಿಡುತ್ತಿವೆ.
ತೇಜಸ್ವಿ ಇಲ್ಲವಾದರು ಎಂಬುದನ್ನು ಒಲ್ಲದೆಯೂ ಒಪ್ಪಲೇಬೇಕಾದಾಗ ನಾಡಿಗೆ ನಾಡೇ ಕಣ್ಣೀರಾಗಿದೆ. ತನ್ನ ತಳಮಳವನ್ನು ಹೇಳಿಕೊಂಡಿದೆ. ತೇಜಸ್ವಿಯವರ ಬದುಕನ್ನು, ಬರಹವನ್ನು, ಅದರ ನಿಗೂಢ ಕುತೂಹಲದ ನಡೆಯನ್ನು ಮತ್ತೆ ಮತ್ತೆ ಗ್ರಹಿಸಲು ಯತ್ನಿಸಿದೆ. ಅಂಥ [...]

Read Full Post | Make a Comment ( None so far )

ಅಂಗ್ಡಿ ರಂಗಿಯ ಆಲಿಂಡಿಯಾ ರೇಡಿಯೋ

Posted on June 13, 2007. Filed under: ನವಿಲುಗರಿಯ ಕಣ್ಣು |

ವಿಜಿ
ಅಂಗ್ಡಿ ರಂಗಿಯೆಂದೊಡನೆ ಮೊದಲು ನೆನಪಾಗುವುದು ಅವಳ ಅಂಗಡಿ. ಅನಂತರ ನೆನಪಾಗುವುದು ಅವಳ ಬಾಯಲ್ಲಿನ ಕವಳದ ರಂಗು. ಅಂಗ್ಡಿ ರಂಗಿಯೆನ್ನುವಾಗ ಕಡೆಯಲ್ಲಿ ನೆನಪಾಗುವುದು ಮೌನ. ಕಿವಿನಿಮಿರಿಸುವಂತೆ ಮಾಡುವ ಮೌನ. ಅವಳಿಗೂ ಈ ಮೌನ ನೆನಪಾಗುವುದು ಕಡೆಯಲ್ಲೇ. ಎಲ್ಲಾ ಕಥೆ ಮಾತಾಡಿ ಮುಗಿಸಿದ ನಂತರ, “ಕಂಡೋರ ಸುದ್ದಿ ನಮಗ್ಯಾಕೇ ಅವ್ವ” ಎಂದು ಅವಳೊಂದು ರಾಗವೆಳೆದುಬಿಟ್ಟರೆ, ಬಿತ್ತು ಅಂಕದ ಪರದೆ ಎಂದೇ ಲೆಕ್ಕ. ಆಗೆಲ್ಲ, ಭೋರೆಂದು ಬೀಳುತ್ತಿದ್ದ ಮಳೆ ಅಕಾಲಿಕವಾಗಿ ನಿಂತು ನೆರೆಯುವ ಮೌನವಿರುತ್ತದಲ್ಲ, ಅಂಥದೇ ಮೌನ ಕಾಲು ಮುರಿದುಕೊಂಡು ಬೀಳುತ್ತದೆ. [...]

Read Full Post | Make a Comment ( 2 so far )

ತನ್ನ ಬಿಚ್ಚಿಟ್ಟ ರಾತ್ರಿಯ ಎದುರು

Posted on June 13, 2007. Filed under: ಬಾ ಕವಿತಾ |

ಅನ್ವಯ
ನಗರದೊಳಗಿಂದ ಹಾದು ಹೋಗುವ ಟ್ರಕ್ಕುಗಳ ಸದ್ದಿನಲ್ಲಿ ನೆತ್ತರ ನಡೆ ಕದಡದಿರುವಂತೆ ನೋಡಿಕೊಳ್ಳುವುದು ಎಷ್ಟೊಂದು ಕಷ್ಟ!
ಬಂಡಿಯನ್ನೆಳೆವ ಜಾನುವಾರುಗಳು ವಿಚಲಿತಗೊಳ್ಳದಂತೆ ಮಾಡುವುದು ಎಷ್ಟೊಂದು ಕಷ್ಟ!
ಯಾವ ಪ್ರೇರಣೆ, ಯಾವ ಭರವಸೆ, ಯಾವ ರುಷುವತ್ತು, ಯಾವ ಬೆದರಿಕೆ ಶಾಂತವಾಗಿರಿಸೀತು ಅವನ್ನು?
ಆದರೆ ಅವು ಶಾಂತವಾಗಿವೆ.
ಕಮಾನು ದಾರಿಯ ಕೆಳಗಿನ ನಿರುಪಯುಕ್ತ ಕಲ್ಲು ಬೆಳದಿಂಗಳನ್ನು ಉಸಿರಾಡುತ್ತಿದೆ.
ಸಾಣೆಗಾರನ ದುರ್ಬಲ ದೇಹ ಬಾಗಿದೆ, ಬಿದಿಗೆ ಚಂದ್ರನ ಹಾಗೆ.
ನಿತ್ರಾಣಗೊಂಡಿದ್ದಾನೆ ಅವನು; ಆದರೆ ನಿದ್ರಿಸಲು ಹೋಗುತ್ತಿಲ್ಲ.
ನಿದ್ರೆಯಿಂದೆಚ್ಚರಿಸಿ ಹಕ್ಕಿಗಳನ್ನು ಸೇತುವೆಯಂಚಿಗೆ ಕರೆಯಲು ಸಿಳ್ಳೆ ಹಾಕುತ್ತಿದ್ದಾನೆ.
ಆದರೆ ಅವನು ಮರೆತಿದ್ದಾನೆ:
ಚಂದ್ರನಂತೆ ಬೆಳ್ಳಗಿರುವ ಕಡಿದಾದ ಬಂಡೆಯ ಮೇಲೆ ಯಾರ [...]

Read Full Post | Make a Comment ( None so far )

  • ನಿಮ್ಮ ಇ- ಮೇಲ್ ಕೊಡಿ ಸಾಕು..ನೀವಿದ್ದಲ್ಲಿಗೆ 'ಅವಧಿ' ಕಳಿಸುತ್ತೇವೆ

    Enter your email address to subscribe to this blog

  • ಓದಿ ಓದಿ ಮರುಳಾಗಿ.. ನಮ್ಮ 'ಬುಕ್ ಬಜಾರ್'ನಲ್ಲಿ

    ಫೋಟೋ ಮೇಲೆ ಕ್ಲಿಕ್ ಮಾಡಿ 'ಓದು ಬಜಾರ್' ತಲುಪಿ

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ

    will be back after a week.....



    Caught in the wild

    .........one more year of mixed xpressions

    lets lift

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • ಕ್ಯಾಲೆಂಡರ್

    June 2007
    M T W T F S S
        Jul »
     123
    45678910
    11121314151617
    18192021222324
    252627282930  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...