Archive for June 9th, 2007
ಅಸಾಧಾರಣ ಕಥೆಗಳ ದಂಡೆಯಲ್ಲಿ ನಿಂತಿದ್ದೇವೆ
ಸರಯೂ ಚೈತನ್ಯ
ಕೇಳು ಜನಮೇಜಯ…
ಕಥನ ಸಂಸ್ಕೃತಿಯ ಅನನ್ಯ ರೂಪಕದಂತಿದೆ ಈ ಸೊಲ್ಲು. ಪ್ರಭುತ್ವವನ್ನು ಮಣಿಸುವ, ಮೀರುವ, ತಿದ್ದುವ, ನಿರ್ದೇಶಿಸುವ ಮತ್ತು ಲೋಕಜ್ಞಾನವನ್ನು ಅದಕ್ಕೆ ಕೊಡುವ ಧ್ಯಾನ ಹಾಗೂ ಧ್ಯಾಸದಲ್ಲಿ ಕಥನದ ಪರಂಪರೆಯಿರುವುದು. ಅದಕ್ಕಿಂತಲೂ ಮಿಗಿಲಾಗಿ, ಅಬಾಧಿತ ನಿಕಟತೆಯೆಂಬಂತೆ ಸಂಸ್ಕೃತಿಯೇ ಒಂದು ಕಥನವೂ, ಕಥನವೇ ಸಂಸ್ಕೃತಿಯ ಸಂವಿಧಾನವೂ ಆಗಿದೆ.
ಒಬ್ಬ ವಾಲ್ಮೀಕಿಯ ರಾಮಾಯಣವನ್ನು ಎಷ್ಟೆಲ್ಲ ಕವಿಗಳು ಮರಳಿ ಮರಳಿ ಕಂಡುದಕ್ಕೆ, ವ್ಯಾಸ ಪ್ರಜ್ಞೆಯ ಮಹಾಭಾರತವನ್ನು ಮತ್ತೆಷ್ಟೋ ಪ್ರಜ್ಞೆಗಳು ಪ್ರವೇಶಿಸಿದುದಕ್ಕೆ ಕಥನದ ಸಾತತ್ಯವೇ ಮಾರ್ಗವಾದದ್ದು. ರಾಮಾಯಣದ, ಮಹಾಭಾರತದ ಅಷ್ಟೊಂದೂ ಆವೃತ್ತಿಗಳು ಕಾಲ, ಸ್ಥಿತಿ [...]







